ಮಂಜೇಶ್ವರ, ಆ 11 (Daijiworld News/MSP): ಮಂಜೇಶ್ವರ ಠಾಣಾ ವ್ಯಾಪ್ತಿಯ ಮೀ೦ಜ ಚಿಗುರುಪಾದೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು ಉತ್ಸವ ಮೂರ್ತಿ ಸಹಿತ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ದೇವಸ್ಥಾನ ಗೋಪುರದ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದು ಅರ್ಚಕರ ಕೊಠಡಿಯಲ್ಲಿದ್ದ ಗರ್ಭಗುಡಿಯ ಕೀಲಿ ಕೈ ಬಳಸಿ ಬಾಗಿಲು ತೆರೆದು ಕಳವು ನಡೆಸಲಾಗಿದೆ. ಗರ್ಭಗುಡಿಯ ಶಿವಲಿಂಗ ಮೂರ್ತಿಯ ಎರಡು ಜೊತೆ ಬೆಳ್ಳಿಯ ಕಣ್ಣು , ಬೆಳ್ಳಿಯ ಹರಿವಾಣ , ಧಾರೆಯ ಬಟ್ಟಲು, ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಲಾಗಿದೆ.
ಕಾಣಿಕೆ ಹುಂಡಿಗಳನ್ನು ತೆರೆದು ಹಣ ದೋಚಿದ್ದು, ಕ್ಷೇತ್ರದ ಎರಡು ಕಚೇರಿಗಳಲ್ಲಿ ಕಳವಿಗೆ ಯತ್ನ ನಡೆದಿದೆ. ಬೆಳಿಗ್ಗೆ ಅರ್ಚಕ ಗೋಪಾಲ ಕೃಷ್ಣ ಭಟ್ ಆಗಮಿಸಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ . ದೇವಸ್ಥಾನ ಸಮಿತಿಯ ಗೋಪಾಲಕೃಷ್ಣ ರವರು ನೀಡಿದ ದೂರಿನಂತೆ ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ