ಕಾಸರಗೋಡು, ಆ. 11 (DaijiworldNews/SM): ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 145 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ.

ಇನ್ನು ಮಂಗಳವಾರದಂದು 266 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ 73 ಹಾಗೂ ಚೆಮ್ನಾಡ್ ನಲ್ಲಿ 37 ಮಂದಿಗೆ ಸೋಂಕು ದ್ರಢಪಟ್ಟಿದೆ.