ಮೂಡುಬಿದ್ರೆ, ಆ 12 (DaijiworldNews/PY): ಬೈಕ್ ಸ್ಕಿಡ್ ಆದ ಪರಿಣಾಮ ಸವಾರ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಾಲ್ಪಾಡಿಯ ಕ್ವಾಯಕುಡೆ ಎಂಬಲ್ಲಿ ಬುಧವಾರ ನಡೆದಿದೆ.

ಮೃತಪಟ್ಟ ಬೈಕ್ ಸವಾರನನ್ನು ಅಳಿಯೂರಿನ ವಿಕಾಸ್ ನಗರದ ನಿವಾಸಿ ತಿಮ್ಮಪ್ಪ ಮಡಿವಾಳ (55) ಎಂದು ತಿಳಿದುಬಂದಿದೆ.
ತಿಮ್ಮಪ್ಪ ಮಡಿವಾಳ ಅವರು ಬೆಳಗ್ಗೆ 5 ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಶಿರ್ತಾಡಿಯಲ್ಲಿರುವ ತಮ್ಮ ಹೊಟೇಲ್ ಕಡೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.