ಮೂಡುಬಿದಿರೆ, ಆ 12 (Daijiworld News/MSP): ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅವರ ತಾಯಿ, ಮೂಡುಬಿದಿರೆ ಸ್ವರಾಜ್ಯ ಮೈದಾನ ಮಾರಿಗುಡಿ ಬಳಿಯ ನಿವಾಸಿ ರಮೇಶ್ ಶಾಂತಿ ಅವರ ಪತ್ನಿ ಕಸ್ತೂರಿ (63) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನರಾದರು.

ಕಸ್ತೂರಿ ಅವರಿಗೆ ಬುಧವಾರ ಬೆಳಗ್ಗೆ ಹೃದಯಾಘಾತವಾಗಿದ್ದು ಅಲಂಗಾರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ.ಅವರು ಸುದರ್ಶನ್ ಮೂಡುಬಿದಿರೆ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.