ಉಡುಪಿ, ಆ 12 (DaijiworldNews/PY): ಸರಕಾರವು, ಬೆಂಗಳೂರಿನಲ್ಲಿ ಗಲಭೆಗೆ ಕಾರಣವಾದ ಸಂಘಟನೆಯನ್ನು ಶೀಘ್ರವೇ ನಿಷೇದಿಸಬೇಕು. ಪಿಎಫ್ಐ, ಎಸ್ಡಿಪಿಐ ನ ಎಲ್ಲಾ ರಾಜ್ಯ ನಾಯಕರನ್ನು ಬಂಧಿಸಬೇಕು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.


ಈ ಬಗ್ಗೆ ಉಡುಪಿಯ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಬಜರಂಗ ದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್ ಅವರು, ಬೆಂಗಳೂರಿನ ಗಲಭೆಗೆ ಕಾರಣವಾದ ಸಂಘಟನೆಯನ್ನು ಸರಕಾರ ಶೀಘ್ರವೇ ನಿಷೇಧಿಸಬೇಕು. ಪಾಕಿಸ್ತಾನದ ಐಎಸ್ಐ ಹಾಗೂ ಭಯೋತ್ಪದಕ ಸಂಘಟನೆಯು ಕುಮ್ಮಕ್ಕು ನೀಡುತ್ತಿದೆ. ಈ ಸಂಘಟನೆಗಳನ್ನು ಸರಕಾರ ಕೂಡಲೇ ಬಂಧಿಸಬೇಕು. ಅಲ್ಲದೇ, ಈ ಸಂಘಟನೆಗಳ ನಾಯಕರನ್ನೂ ಕೂಡಾ ಬಂಧಿಸಬೇಕು ಎಂದು ತಿಳಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಅವರೊಂದಿಗೆ ನಾವಿದ್ದೇವೆ. ಅವರು ಭಯಪಡುವ ಅಗತ್ಯವಿಲ್ಲ. ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಆಯಾ ಜಿಲ್ಲಾ ಆಯೋಗಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಗೃಹ ಸಚಿವರ ಬದಲಾವಣೆಯ ಕುರಿತು ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸುನೀಲ್ ಕೆ.ಆರ್, ಗೃಹ ಸಚಿವರ ಬದಲಾವಣೆಯನ್ನು ಸರ್ಕಾರದ ತೀರ್ಮಾನಕ್ಕೆ ಬಿಡಲಾಗಿದೆ. ನಾವು ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಖಂಡಿಸುತ್ತೇವೆ ಹಾಗೂ ಅಪರಾಧಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಈ ಸಂದರ್ಭ, ಉಡುಪಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳದ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಹಾಗೂ ಇತರರು ಉಪಸ್ಥಿತರಿದ್ದರು.