ಮಂಗಳೂರು, ಆ 12 (Daijiworld News/MSP): ಕಾನೂನಿಗೆ ಬೆಲೆ ನೀಡದವರಿಗೆ ಕಾನೂನನ್ನು ಅರ್ಥ ಮಾಡಿಸುವ ಭಾಷೆ ನಮಗೆ ತಿಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಗಲಭೆಯ ಕುರಿತು ಟ್ವೀಟ್ ಮಾಡಿರುವ ಅವರು, " ಘಟನೆಯ ಹಿಂದೆ ಅರಾಜಕತೆ ಸೃಷ್ಟಿಸುವ ರಾಜಕೀಯ ಹುನ್ನಾರ ಇದೆ. ಇಂತಹ ಘಟನೆಗಳ ಹಿಂದೆ ಎಸ್ ಡಿ ಪಿ ಐ, ಪಿಎಫ್ ಐ ಶಾಮೀಲಾಗಿದೆ ಇದು ಪೂರ್ವನಿಯೋಜಿತ ಕೃತ್ಯವಾಗಿದೆ ಎಂದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ "ಬೆಂಗಳೂರಿನ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿಯಲ್ಲಿ ನಡೆದ ನಿನ್ನೆಯ ಗಲಭೆಗೆ ಕಾರಣರಾದ ಸಮಾಜಘಾತುಕ ಶಕ್ತಿಗಳು ಮತ್ತು ಮತಾಂಧರು ಎಷ್ಟೇ ಪ್ರಬಲರಾಗಿದ್ದರೂ, ಅಂತವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ನೀಡಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ಇಂತಹ ಘಟನೆಗಳನ್ನು ನೋಡಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ.!!"
"ಕಾನೂನಿಗೆ ಬೆಲೆ ನೀಡದವರಿಗೆ ಅರ್ಥ ಮಾಡಿಸುವ ಭಾಷೆ ನಮಗೆ ತಿಳಿದಿದೆ. ಪೋಲಿಸ್ ಇಲಾಖೆ ಈಗಾಗಲೇ ಘಟನೆಗೆ ಸಂಭಂದಿಸಿದ ಹಲವರನ್ನು ಬಂಧಿಸಿದೆ, ವಿಚಾರಣೆ ನಡೆಯುತ್ತಿದೆ"ಎಂದಿದ್ದಾರೆ.