ಕಾಸರಗೋಡು, ಜು. 12 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿದೆ. ಇದುವರೆಗೆ 3006 ಮಂದಿಗೆ ಸೋಂಕು ತಗಲಿದೆ.

ಇದುವರೆಗೆ 1870 ಮಂದಿ ಗುಣಮುಖರಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ. 1119 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ 68 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 66 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ 58 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಹೊರರಾಜ್ಯದಿಂದ ಬಂದವರು .ಇಬ್ಬರು ಆರೋಗ್ಯ ಸಿಬಂದಿಗಳಿಗೆ ಸೋಂಕು ದೃಢಪಟ್ಟಿದೆ.
ಉದುಮ 27, ಕಾಸರಗೋಡು 8, ಕಳ್ಳಾರ್, ಮೀಂಜ, ಚೆಮ್ನಾಡ್, ಪಿಲಿಕ್ಕೋಡ್, ಪುತ್ತಿಗೆ, ಪಡನ್ನ, ಮುಳಿಯಾರು, ಪುಲ್ಲೂರು ಪೆರಿಯ ತಲಾ 1,ಅಜನೂರು 5, ಕಾಞಂಗಾಡ್, ಪಳ್ಳಿಕೆರೆ ತಲಾ 3, ಮಧೂರು , ಮಂಜೇಶ್ವರ , ತಲಾ ಎರಡು , ತ್ರಿಕ್ಕರಿಪುರ 6, ಕೋಡೋ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕು ಮಂದಿಗೆ ಸೋಂಕು ದ್ರಢಪಟ್ಟಿದೆ. 4998 ಮಂದಿ ನಿಗಾದಲ್ಲಿದ್ದು, 1405 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.