ಬಂಟ್ವಾಳ, ಆ. 13 (DaijiworldNews/MB) : ಮಂಗಳೂರು ಲೋಕಾಯುಕ್ತ ಪೋಲೀಸ್ ಇಲಾಖೆಯಲ್ಲಿ ಚಾಲಕನಾಗಿದ್ದ ಪೋಲೀಸ್ ಸಿಬ್ಬಂದಿ ಹಾಸನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಲೋಕೇಶ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಚೆನ್ನರಾಯಪಟ್ಟಣ ನಂದಗೋಕುಲ ಲಾಡ್ಜ್ ನಲ್ಲಿ ನಿನ್ನೆ ರಾತ್ರಿ 10 00 ರ ಸುಮಾರಿಗೆ ರೂಮ್ ಮಾಡಿದ್ಲು ಈ ದಿನ ತಡವಾಗಿ ಹೊತ್ತಿನವರೆಗೂ ರೂಮ್ ಬಾಗಿಲು ತೆಗೆಯದೇ ಇದ್ದ ಕಾರಣ ರೂಮ್ ಒಡೆದು ನೋಡಿದಾಗ ಲೋಕೇಶ್ ರವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ.
ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನರಾಯಪಟ್ಟಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.