ಬೆಳ್ತಂಗಡಿ, 13(DaijiworldNews/HR): ಎಂಆರ್ ಎಫ್ ಟಯರ್ಸ್ ಮಳಿಗೆ ಮಾಲಕ, ಖ್ಯಾತ ಉದ್ಯಮಿ ಪ್ರಕಾಶ್ ತುಳುಪುಲೆ ಅಸಹಜವಾಗಿ ಸಾವಿಗೀಡಾದ ಘಟನೆ ನಡೆದಿದೆ.

ಮಳಿಗೆ ಬಂದ್ ಮಾಡಿ ಮನೆಗೆ ತೆರಳಿದ ಪ್ರಕಾಶ್, ಮನೆ ಹಿಂಭಾಗದ ಶೆಡ್ ಬಳಿಗೆ ಹೋಗಿ ಬರುವುದಾಗಿ ತಮ್ಮ ಮಗಳಿಗೆ ತಿಳಿಸಿದ್ದರು. ಬಳಿಕ ತುಂಬಾ ಹೊತ್ತಾದರೂ ಅಪ್ಪ ಮರಳದಿರುವುದನ್ನು ಕಂಡು ಅವರ ಮಗಳು ಹೊರಬಂದು ನೋಡಿದಾಗ ಪ್ರಕಾಶ್ ಅವರ ಚಪ್ಪಲಿ ಬಾವಿಯ ಸಮೀಪ ಕಂಡಿದೆ. ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಇಸ್ಮಾಯಿಲ್ ಎಂಬುವವರು ಬಾವಿಗೆ ಇಳಿದು ಪ್ರಕಾಶ್ ದೇಹವನ್ನು ಮೆಲಕ್ಕೆತ್ತಿ ತಕ್ಷಣವೇ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪ್ರಕಾಶ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಹೆಸರಾಂತ ಉದ್ಯಮಿ ಪ್ರಕಾಶ್ ಸಾವಿಗೆ ನಿಖರ ಕಾರಣ ಯಾವುದೆಂದು ತಿಳಿದುಬಂದಿಲ್ಲ.