ಕಾಸರಗೋಡು, ಆ 13 (Daijiworld News/MSP): ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 45 ಲಕ್ಷ ರೂ . ಮೌಲ್ಯದ ಚಿನ್ನಾಭರಣವನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಮಂಜೇಶ್ವರ ನಿವಾಸಿಗಳಾದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಜೇಶ್ವರದ ಸತ್ತಾರ್ ಮತ್ತು ಸಮೀರ್ ಎಂದು ಗುರುತಿಸಲಾಗಿದೆ . ಶಾರ್ಜಾ ಹಾಗೂ ದುಬೈಯಿಂದ ಬಂದಿದ್ದರು.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಿಂದ ಅಕ್ರಮ ಚಿನ್ನಾಭರಣ ಸಾಗಾಟ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಸ್ಟಮ್ಸ್ ತಪಾಸಣೆ ತೀವ್ರಗೊಳಿಸಿದ್ದು , ಆಗಸ್ಟ್ 6 ರಂದು ದುಬೈಯಿಂದ ಬಂದಿದ್ದ ಇಬ್ಬರು ಕಾಸರಗೋಡು ನಿವಾಸಿಗಳಿಂದ 56 ಲಕ್ಷ ರೂ . ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು .
ಆಗಸ್ಟ್ ಎರಡು ಮತ್ತು ಮೂರರಂದು ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು