ಮಂಗಳೂರಿನ ಪ್ರಧಾನ ಗೃಹ ನಿರ್ಮಾಣ ಸಂಸ್ಥೆಯಾದ ಇನ್ಲ್ಯಾಂಡ್ ಬಿಲ್ಡರ್ಸ್ ಕಳೆದ ಮೂರು ದಶಕಗಳಿಂದ ಉನ್ನತ ಗುಣಮಟ್ಟದ ಮನೆಗಳನ್ನು ನಿರ್ಮಿಸುತ್ತಿದ್ದು, ಸುಂದರ ಹಾಗೂ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಹೊಂದಬೇಕೆನ್ನುವ ಮಂಗಳೂರಿನ ಜನರ ಆಶಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.

ಸುಂದರ ಹಾಗೂ ಸಮೃದ್ಧವಾದ ಬದುಕು ಎಂದಿಗೂ ದುಬಾರಿಯಲ್ಲ. ಈ ಧ್ಯೇಯವನ್ನು ಅಳವಡಿಸಿಕೊಂಡು ಸಂಸ್ಥೆಯು ಗ್ರಾಹಕರಿಗೆ ಸ್ವಾತಂತ್ರ್ಯೋತ್ಸವ 2020ರ ಕೊಡುಗೆಯನ್ನು ಪರಿಚಯಿಸಿದೆ. ಉನ್ನತ ಗುಣಮಟ್ಟ, ಆಧುನಿಕ ಸೌಲಭ್ಯವಿರುವ ವಸತಿಗೃಹವನ್ನು ಗ್ರಾಹಕರಿಗೆ ಅವರ ಬಜೆಟ್ನ ವ್ಯಾಪ್ತಿಯಲ್ಲಿ ಒದಗಿಸುವುದೆ ಸಂಸ್ಥೆಯ ಉದ್ಧೇಶವಾಗಿದೆ. ಈ ಕೊಡುಗೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ವಸತಿ ಸಮುಚ್ಛಯ ಕೂಳೂರು ಕಾವೂರು ಮುಖ್ಯ ರಸೆಯಲ್ಲಿರುವ ಇನ್ಲ್ಯಾಂಡ್ ಸಂಸ್ಥೆಯ ಪ್ರತಿಷ್ಠಿತ ಯೋಜನೆ ಇನ್ಲ್ಯಾಂಡ್ ಸನ್ಲೈಟ್ ಮೂನ್ಲೈಟ್.
ಈ ವಸತಿ ಸಮುಚ್ಛಯವು 75 ಪ್ರೀಮಿಯಂ ಫ್ಲಾಟ್ಗಳನ್ನು ಒಳಗೊಂಡಿದ್ದು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪರಿಸರದಲ್ಲಿದೆ. ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ದ್ವಿಪಥ ರಸ್ತೆಯಲ್ಲಿರುವ ಈ ವಸತಿ ಸಮುಚ್ಛಯವು ಲೇಡಿಹಿಲ್ ಜಂಕ್ಷನ್ನಿಂದ 10 ನಿಮಿಷಗಳ ಅಂತರದಲ್ಲಿದೆ, ಅಲ್ಲದೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಮಹೇಶ್ ಪಿಯು ಕಾಲೇಜ್, ಕರಾವಳಿ ಕಾಲೇಜ್, ಬಿಜಿಎಸ್ ಶಾಲೆ, ಪೊದಾರ್ ಅಂತರಾಷ್ಟ್ರೀಯ ಶಾಲೆ, ಎಜೆ ಆಸ್ಪತ್ರೆ ಮತ್ತು ಪ್ರಸಿದ್ಧ ಸೂಪರ್ ಮಾರ್ಕೆಟ್ಗಳು ಅನತಿ ದೂರದಲ್ಲಿದೆ.
12ಅಂತಸ್ತುಗಳ ಈ ವಸತಿ ಸಮುಚ್ಛಯವು 1025, 1055, 1095ಚದರ ಅಡಿಯ 2 ಬಿಎಚ್ಕೆ, ಮತ್ತು 1415 ಚದರ ಅಡಿಯ 3 ಬಿಎಚ್ಕೆ ಫ್ಲಾಟ್ಗಳನ್ನು ಹೊಂದಿದೆ. ಅಲ್ಲದೇ ಜಿಮ್ನಾಶಿಯಂ, ಸಿಸಿಟಿವಿ, ಮಕ್ಕಳ ಆಟದ ತಾಣ, ಲ್ಯಾಂಡ್ಸ್ಕೇಪ್ ಗಾರ್ಡನ್, ಸ್ವಯಂಚಾಲಿತ ಎಲಿವೇಟರ್, ಅಗ್ನಿನಿರೋಧಕ ವ್ಯವಸ್ಥೆ ಹಾಗೂ ಜನರೇಟರ್ ಮುಂತಾದ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.
ತನ್ನದೇ ಆದ ಸ್ವಂತ ಮನೆಯ ಮಾಲಿಕನಾಗಬೇಕೆಂದು ಸಾಮಾನ್ಯ ವರ್ಗದ ಪ್ರತಿಯೊಬ್ಬ ಜನರ ಕನಸು ಮತ್ತು ಆಕಾಂಕ್ಷೆ. ಆದರೆ ಅಂತಹ ಮನೆ ದುಬಾರಿ ಹಾಗೂ ತಮ್ಮ ವ್ಯಾಪ್ತಿಯನ್ನು ಮೀರಿದೆ ಎಂದು ಭಯಪಡುತ್ತಾರೆ. ಇದನ್ನರಿತ ಇನ್ಲ್ಯಾಂಡ್ ಸಂಸ್ಥೆ ಜನರ ಭಯವನ್ನು ಹೋಗಲಾಡಿಸಲು ಈ ಸ್ವಾತಂತ್ರ್ಯೋತ್ಸವದ ಆಕರ್ಷಕ ಕೊಡುಗೆಯನ್ನು ಹೊತ್ತುತಂದಿದೆ. ಗ್ರಾಹಕರಿಗೆ ದುಬಾರಿ ಎಂದೆನ್ನುವ ಭಯವನ್ನು ಹೋಗಲಾಡಿಸಿ ತಾವು ಬಯಸಿದ ವಸತಿಗಳನ್ನು ತರ್ಕಬದ್ಧವಾದ ಬೆಲೆಗೆ ಪಡೆಯಲು ಇದೊಂದು ಸುವರ್ಣಾವಕಾಶ ಎಂದು ಇನ್ಲ್ಯಾಂಡ್ ಸಂಸ್ಥೆಯ ನಿರ್ದೇಶಕ ಮೆರಾಜ್ ಯೂಸಫ್ ತಿಳಿಸಿದ್ದಾರೆ.
ಈ ಕೊಡುಗೆಯು ಅಗಸ್ಟ್10 ರಿಂದ ಪ್ರಾರಂಭವಾಗಿದ್ದು ಅನೇಕರು ಈಗಾಗಲೇ ಈ ಕೊಡುಗೆಯ ಫಲಾನುಭವಿಗಳಾಗಿದ್ದಾರೆ. ಆಕರ್ಷಕ ದರದಲ್ಲಿ ಲಭ್ಯವಾಗುವ ಉತ್ತಮ ಹಾಗೂ ಸಮೃದ್ಧ ಮನೆಯನ್ನು ಹೊಂದಲು ಬಯಸುವ ಎಲ್ಲ ಗ್ರಾಹಕರು ನಮ್ಮ ಕಛೇರಿಗೆ ಭೇಟಿ ನೀಡಿ ನಿಮ್ಮ ಇಚ್ಛೆಯ ವಸತಿಯನ್ನು ತಮ್ಮದಾಗಿಸಕೊಳ್ಳಬೇಕೆಂದು ವಿನಂತಿಸಿದ್ದಾರೆ.
ಈ ವಸತಿ ಸಮುಚ್ಛಯವು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಬಡ್ಡಿ ರಿಯಾತಿಗೆ ಅರ್ಹವಾಗಿದೆ ಮತ್ತು ಮನೆ ಖರೀದಿಸ ಬಯಸುವ ಗ್ರಾಹಕರಿಗೆ ಹಣಕಾಸು ಆಯ್ಕೆಗಳಿಗೆ ಅನುಕೂಲವಾಗಲು ಗೃಹಸಾಲಕ್ಕಾಗಿ ಪ್ರಮುಖ ಸಾರ್ವಜನಿಕ ವಲಯ ಬ್ಯಾಂಕ್ಗಳ ಸಹಯೋಗದೊಂದಿಗೆ ಬ್ಯಾಂಕ್ ಲೋನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
15 ದಿನಗಳ ಈ ಸ್ವಾತಂತ್ರ್ಯೋತ್ಸವದ ಬೃಹತ್ ಕೊಡುಗೆ ಅಗಸ್ಟ್ 25 ರಂದು ಕೊನೆಗೊಳ್ಳುತ್ತದೆ. ಇನ್ಲ್ಯಾಂಡ್ ಬ್ರಾಂಡ್ನ ವಸತಿ ಸಮುಚ್ಛಯವನ್ನು ಹೊಂದಲು ಈ ಬೃಹತ್ ಕೊಡುಗೆಯ ಅವಕಾಶವನ್ನು ಸದುಪಯೋಗಗೊಳಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880138015, 9972014055, 9972089099
ಮೇಲ್: mktg.mlr@inlandbuilders.net
ವೆಬ್: www.inlandbuilders.net