ಮಂಗಳೂರು, ಆ 14 (Daijiworld News/MSP): ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಭವನದ ಮೇಲೆ ಕಲ್ಲುತೂರಾಟ ನಡೆದಿರುವ ಘಟನೆ ಆ.13 ರ ಗುರುವಾರ ತಡರಾತ್ರಿ ನಡೆದಿದ್ದು , ಇಂದು ವಿಚಾರ ಬೆಳಕಿಗೆ ಬಂದಿದೆ.


ಕರ್ನಾಟಕ ಸರ್ಕಾರದ ಮೌಲಾನ ಅಝಾದ್ ಅಲ್ಪಸಂಖ್ಯಾತರ ಭವನ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾಗಿರುವ ಗಾಜಿಗೆ ಹಾನಿಯಾಗಿದೆ.
ಪ್ರಕರಣ ತಡವಾಗಿ ಬೆಳಕಿಗೆ ಬಂದ ಕಾರಣ ಘಟನಾ ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಹಾಗೂ ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು ಸ್ಥಳದಲ್ಲಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.