ಮಂಗಳೂರು, ಜು. 14 (DaijiworldNews/SM): ಎಕ್ಕೂರು ಬಾಬಾ ಎಂದೇ ಪ್ರಸಿದ್ಧರಾಗಿದ್ದ ಹಿಂದೂ ಯುವ ಸೇನೆಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಶುಭಕರ ಶೆಟ್ಟಿ ಆಗಸ್ಟ್ 14ರ ಶುಕ್ರವಾರದಂದು ನಿಧನರಾಗಿದ್ದಾರೆ.

ಎಕ್ಕೂರು ಬಾಬಾ ಮಧುಮೇಹ ಸಹಿತ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶುಕ್ರವಾರದಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಎಕ್ಕೂರು ಬಾಬಾ ಅವರ ತಾಯಿ ಕಳೆದ ವಾರದ ಅನಾರೋಗ್ಯ ಹಿನ್ನೆಲೆಯಲ್ಲಿ ನಿಧನರಾಗಿದ್ದರು. ಅದರ ಬೆನ್ನಲ್ಲೇ ಇದೀಗ ಎಕ್ಕೂರು ಬಾವಾ ಅವರು ಕೂಡ ನಿಧನರಾಗಿದ್ದಾರೆ.