ಕಾಸರಗೋಡು, ಆ 15 (DaijiworldNews/PY): ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 440 ವಿದೇಶಿ ಬಾಟ್ಲಿಗಳನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಳಿಯಡ್ಕ ಸಮೀಪದ ರಾಮಕೃಷ್ಣ ಎಂಬವರ ಹಿತ್ತಲಿನಲ್ಲಿ ಮೂರು ಗೋಣಿ ಚೀಲಗಳಲ್ಲಿ ಮದ್ಯವನ್ನು ತುಂಬಿಸಿಡಲಾಗಿತ್ತು. ಈ ಬಗ್ಗೆ ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಕೃಷ್ಣ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ