ಕಾಸರಗೋಡು, ಆ 15(DaijiworldNews/HR) : ಕೊರೊನಾ ಹಿನ್ನಲೆ ಹಾಗೂ ಓಣಂ ಹಬ್ಬ ಹತ್ತಿರವಾಗುತ್ತಿರುವುದರಿಂದ ಬ್ಯಾಂಕ್ ಗಳಲ್ಲಿ ಗ್ರಾಹಕರ ದಟ್ಟಣೆ ಮನಗಂಡು ಕೇರಳದಲ್ಲಿ ಆಗಸ್ಟ್ 16ರಿಂದ ಸೆ.9ರ ವರೆಗೆ ಬ್ಯಾಂಕಿಂಗ್ ಸಮಯಗಳಲ್ಲಿ ಬದಲಾವಣೆ ತರಲಾಗಿದೆ.

0, 1, 2,3 ಎಂಬಿ ಅಕೌಂಟ್ ನಂಬರ್ ಗಳಲ್ಲಿ ಕೊನೆಗೊಳ್ಳುವ ಗ್ರಾಹಕರಿಗೆ ಬೆಳಿಗ್ಗೆ 10 ರಿಂದ 12 ಗಂಟೆ ತನಕ , 4, 5, 6, 7 ನಂಬರಿನವರಿಗೆ ಮಧ್ಯಾಹ್ನ 12 ರಿಂದ 2 ಗಂಟೆ ತನಕ ಹಾಗೂ 8, 9 ನಂಬರಿನವರಿಗೆ 2.30 ರಿಂದ ಸಂಜೆ 4 ರ ತನಕ ಸಮಯ ನೀಡಲಾಗಿದೆ.
ಸಾಲಕ್ಕೆ ಸಂಬಂಧಪಟ್ಟ ಹಾಗೂ ಇತರ ವ್ಯವಹಾರಗಳಿಗೆ ಈ ನಿಯಂತ್ರಣ ಅನ್ವಯವಾಗುವುದಿಲ್ಲ.
ಸೆಪ್ಟಂಬರ್ 9ರ ವರೆಗೆ ಈ ನಿಯಂತ್ರಣ ಜಾರಿಯಲ್ಲಿರಲಿದೆ ಎಂದು ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ.