ಬಂಟ್ವಾಳ, ಆ. 15 (DaijiworldNews/MB) : ತಲಕಾವೇರಿಯ ಬ್ರಹ್ಮಗಿರಿಬೆಟ್ಟ ಕುಸಿತವಾಗಿ ನಾಪತ್ತೆಯಾಗಿದ್ದ ಬಂಟ್ವಾಳದ ಅರ್ಚಕರ ಮೃತದೇಹ ಶನಿವಾರ ಪತ್ತೆಯಾಗಿದೆ.

ಬಂಟ್ವಾಳ ಮೂಲದ ರವಿಕಿರಣ್ (23) ಅವರ ಮೃತದೇಹ ಪತ್ತೆಯಾಗಿದೆ.
ಬೆಟ್ಟ ಕುಸಿದು ಮನೆ ಸಂಪೂರ್ಣ ಮಣ್ಣಿನಡಿ ಸಿಲುಕಿತ್ತು. ಮನೆಯೊಳಗಿದ್ದ ಎಲ್ಲರೂ ನಾಪತ್ತೆಯಾಗಿದ್ದರು. ಈ ಪೈಕಿ ಈಗಾಗಲೇ ನಾರಾಯಣ್ ಆಚಾರ್, ಆನಂದತೀರ್ಥ ಅವರ ಮೃತದೇಹ ಪತ್ತೆಯಾಗಿದೆ. ಇದೀಗ ಬಂಟ್ವಾಳದ ಅರ್ಚಕರ ಮೃತದೇಹ ಪತ್ತೆಯಾಗಿದ್ದು ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.