ಕಾಸರಗೋಡು, ಆ. 15 (DaijiworldNews/MB) : ಜಿಲ್ಲೆಯಲ್ಲಿ ಇಂದು 81 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

76ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದ್ದು ಐದು ಮಂದಿ ವಿದೇಶ, ಇಬ್ಬರು ಹೊರರಾಜ್ಯಗಳಿಂದ ಬಂದವರಾಗಿದ್ದಾರೆ.
ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮಂಜೇಶ್ವರ ಮತ್ತು ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 11, ಕಾಸರಗೋಡು 9, ಚೆಮ್ನಾಡ್, ಅಜಾನೂರು ತಲಾ 7, ಉದುಮ 13, ಪಳ್ಳಿಕೆರೆ, ಕಾರಡ್ಕ ತಲಾ 3, ಕಾಞಂಗಾಡ್ 5, ಬೇಡಡ್ಕ, ಕೋಡೋ ಬೇಳೂರು, ಪಿಲಿಕ್ಕೋಡ್, ಮಧೂರು, ಮಂಗಲ್ಪಾಡಿ, ಕುಂಬಳೆ, ಚೆಂಗಳ, ಕುಂಬ್ಡಾಜೆ, ಮೀಂಜ, ಪುಲ್ಲೂರು ಪೆರಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಇದರಿಂದ ಇದುವರೆಗೆ ಸೋಂಕಿತರ ಸಂಖ್ಯೆ 3215 ಕ್ಕೇರಿದೆ. 1179 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.