ಮಂಗಳೂರು, ಆ. 15 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ 271 ಮಂದಿಯಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8649 ಕ್ಕೆ ಏರಿಕೆಯಾಗಿದೆ.

ಇಂದು ಮಂಗಳೂರಿನಲ್ಲಿ 177, ಬಂಟ್ವಾಳದಲ್ಲಿ 47, ಬೆಳ್ತಂಗಡಿಯಲ್ಲಿ 14, ಪುತ್ತೂರಿನಲ್ಲಿ 23, ಸುಳ್ಯದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 9 ಮಂದಿಗೆ ಪಾಸಿಟಿವ್ ಆಗಿದೆ.
ಇನ್ನು ಜಿಲ್ಲೆಯಲ್ಲಿ ಇಂದು 202 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 6317 ಕ್ಕೆ ಏರಿಕೆಯಾಗಿದೆ.
ಇನ್ನು ಜಿಲ್ಲೆಯಲ್ಲಿ ಆರು ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈ ಪೈಕಿ ನಾಲ್ವರು ಮಂಗಳೂರಿನ ವರಾಗಿದ್ದು ಇಬ್ಬರು ಇತರೆ ಜಿಲ್ಲೆಯವರಾಗಿದ್ದಾರೆ. ಈವರೆಗೆ 262 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹಾಗೆಯೇ ಪ್ರಸ್ತುತ 2070 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ 128 ಐಎಲ್ಎ, 10 ಎಸ್ಎಆರ್ಐ ಪ್ರಕರಣಗಳಾಗಿದ್ದು 39 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು 90 ಮಂದಿಗೆ ಸೋಂಕು ತಗುಲಿರುವ ಸಂಪರ್ಕದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಇನ್ನು ಇಂದು ದೃಢಪಟ್ಟ 271 ಸೋಂಕಿತರ ಪೈಕಿ 152 ಯಲ್ಲಿ ರೋಗದ ಗುಣಲಕ್ಷಣಗಳಿದ್ದು 119 ಮಂದಿಯಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ.