ವಿಟ್ಲ, ಆ 16 (DaijiworldNews/PY): ವ್ಯಕ್ತಿಯೋರ್ವ ಗಿರಾಕಿಯ ಸೋಗಿನಲ್ಲಿ ಅಂಗಡಿ ಮಾಲಕರನ್ನು ಯಾಮಾರಿಸಿ ನಗದು ದೋಚಿದ ಆರೋಪಿಯನ್ನು ಪೊಲೀಸ್ ಉಪನಿರೀಕ್ಷಕ ವಿನೋದ್ ಕೆ. ಎಸ್. ಅವರ ತಂಡ ಯಶಸ್ವಿಯಾಗಿದೆ.

ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ನೆಜಿಗಾರು ಅಂಬೊಟ್ಟು ನಿವಾಸಿ ಶಾಫಿ ಯಾನೆ ಮಹಮ್ಮದ್ ಶಾಫಿ (27) ಎಂದು ಗುರುತಿಸಲಾಗಿದೆ.
ಕುದ್ದುಪದವು ನಿವಾಸಿ ಶ್ರೀಧರ್ ಎನ್ನುವವರಿಗೆ ಸೇರಿದ ದಿನಸಿ ಅಂಗಡಿಯನ್ನು ನೋಡಿದ ತಂಡ ಪಾಯಸ್ತರೆಂಬ ಕಾರಣಕ್ಕೆ ಪಶು ಆಹಾರ ಖರೀದಿ ಮಾಡುವ ನಿಟ್ಟಿನಲ್ಲಿ ಗಿರಾಕಿ ಸೋಗಿನಲ್ಲಿ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಚಿಲ್ಲರೆ ನೀಡುತ್ತಿದ್ದ ಅಂಗಡಿ ಮಾಲಕರನ್ನು ಯಾಮಾರಿಸಿದ ಶಾಫಿ ಸುಮಾರು 33 ಸಾವಿರ ದೋಚಿ ಪರಾರಿಯಾಗಿದ್ದ. ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ವೇಳೆ ಆರೋಪಿ ಕೆಂಪು ಅಂಗಿ ಧರಿಸಿದ್ದು, ತಪ್ಪಿಸಿತ್ತಾದರೂ, ಪೊಲೀಸರ ಆರೋಪಿಯನ್ನು ಉಪ್ಪಿನಂಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ, ಮಂಗಳೂರಿನಲ್ಲಿ ಒಂದು ಪ್ರಕರಣ ಸೇರಿದಂತೆ ಬೆಳ್ತಂಗಡಿಯಲ್ಲಿ 6 ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆ ನಡೆಸಿದ್ದ ಸಂದರ್ಭ ಸತ್ಯ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕಾಸರಗೋಡು ಮೂಲದ ಇನ್ನೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.