ಉಡುಪಿ, ಆ. 16 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಭಾನುವಾರ ಮತ್ತೆ 237 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7968 ಕ್ಕೆ ಏರಿಕೆಯಾಗಿದೆ.

107 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, 45 ಐಎಲ್ಐ, 1 ಸಾರಿ ಪ್ರಕರಣವಾಗಿದೆ. ಇನ್ನೂ 84 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದೆ. ಇಂದು ತಾಲ್ಲೂಕಿನಲ್ಲಿ 122, ಕುಂದಾಪುರದಲ್ಲಿ 100, ಕಾರ್ಕಳ ತಾಲ್ಲೂಕಿನಲ್ಲಿ 14 ಪ್ರಕರಣ ಪತ್ತೆಯಾಗಿದೆ.
ಇನ್ನು ಭಾನುವಾರ ಯಾವುದೇ ಕೊರೊನಾ ಸಾವು ಪ್ರಕರಣಗಳು ದಾಖಲಾಗಿಲ್ಲ. ಶನಿವಾರ ಇಬ್ಬರು ಸಾವನ್ನಪ್ಪಿದ್ದು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 77 ಕ್ಕೆ ಏರಿಕೆಯಾಗಿದೆ. 523 ಮಂದಿಯ ವರದಿ ನೆಗೆಟಿವ್ ಆಗಿದೆ.