ವಿಟ್ಲ, ಆ (DaijiworldNews/HR): ಕಳೆದ ಹಲವು ತಿಂಗಳುಗಳಿಂದ ಬಂದ್ ಆಗಿದ್ದ ಕರ್ನಾಟಕ ಕೇರಳ ಗಡಿ ಭಾಗ ವಿಟ್ಲ ಕಾಸರಗೋಡು ಸಂಪರ್ಕ ರಸ್ತೆಯ ಸಾರಡ್ಕ ಚೆಕ್ ಪೋಸ್ಟ್ ಕೊನೆಗೂ ತೆರೆದಿದೆ.

ಲಾಕ್ ಡೌನ್ ಪ್ರಾರಂಭದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೇರಳ ಪ್ರವೇಶ ನಿಷೇಧಿಸಿ ಚೆಕ್ ಪೋಸ್ಟ್ ಬಂದ್ ಮಾಡಿ ಆದೇಶ ಹೊರಡಿಸಿತ್ತು.
ಇದೀಗ ಜಿಲ್ಲಾಡಳಿತದ ಸೂಚನೆ ಮೇರೆಗೆ ತೆರೆಲಾಗಿದ್ದು, ವಿಟ್ಲ ಪೊಲೀಸರು ಸ್ಥಳೀಯ ನಿವಾಸಿಗಳಿಂದ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ ತೆರಳಲು ಅವಕಾಶ ನೀಡಿದ್ದಾರೆ.
ಇನ್ನು ಈ ಗಡಿ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಮಾತ್ರ ಸಂಚರಿಸಲು ಮಾತ್ರ ಅವಕಾಶವಿದೆ ಎನ್ನಲಾಗಿದೆ.