ಕಾಸರಗೋಡು, ಆ. 16 (DaijiworldNews/MB) : ಜಿಲ್ಲೆಯಲ್ಲಿ ಆದಿತ್ಯವಾರ 48 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 38ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 203 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಓರ್ವ ಆರೋಗ್ಯ ಸಿಬಂದಿಗೆ ಸೋಂಕು ಪತ್ತೆಯಾಗಿದೆ. ನಾಲ್ವರು ವಿದೇಶ, ಆರು ಮಂದಿ ಹೊರ ರಾಜ್ಯಗಳಿಂದ ಬಂದವರು.
1021 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ 2218 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. ಇದುವರೆಗೆ 3263 ಮಂದಿಗೆ ಸೋಂಕು ತಗಲಿದೆ . 24 ಮಂದಿ ಮೃತಪಟ್ಟಿದ್ದಾರೆ.
ಆದಿತ್ಯವಾರ ಕಾಞಂಗಾಡ್ ನಗರಸಭಾ ವ್ಯಾಪ್ತಿ 12, ಚೆಮ್ನಾಡ್ 5, ಪಳ್ಳಿಕೆರೆ 8, ಕಾಸರಗೋಡು 4, ಕುಂಬಳೆ, ಚೆರ್ವತ್ತೂರು, ಮಂಗಲ್ಪಾಡಿ, ತ್ರಿಕ್ಕರಿಪುರ, ಪನತ್ತಡಿ ತಲಾ 2, ಎಣ್ಮಕಜೆ, ಮಡಿಕೈ, ಅಜಾನೂರು, ಕಿನಾನೂರು ಕರಿಂದಲ, ಕಳ್ಳಾರ್, ಮಧೂರು, ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 5,068 ಮಂದಿ ನಿಗಾದಲ್ಲಿದ್ದಾರೆ.