ಬಂಟ್ವಾಳ, ಆ. 17 (DaijiworldNews/MB) : ಸ್ವಾತಂತ್ರ್ಯ ದಿನದ ಮರುದಿನ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಿ, ರಾತ್ರಿಯವರೆಗೂ ಇಳಿಸದ ಘಟನೆ ಬಂಟ್ವಾಳದ ಮಣಿನಾಲ್ಕೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದ್ದು ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಗ್ರಾಮೀಣ ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರು ನೀಡಿದ್ದಾರೆ.


ಆಗಸ್ಟ್ 16 ಸೋಮವಾರ ಬೆಳಿಗ್ಗೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಣಿನಾಲ್ಕೂರು ಗ್ರಾಮ ಪಂಚಾಯತಿಯಲ್ಲಿ ಹಾರಿಸಲಾಗಿದ್ದು ಹಸಿರು ಬಣ್ಣ ಮೇಲೆ ಹಾಗೂ ಕೇಸರಿ ಬಣ್ಣ ಕೆಳಗೆ ಬರುವಂತೆ ತಲೆ ಕೆಳಗಾಗಿ ಹಾರಿಸಲಾಗಿದೆ. ಹಾಗೆಯೇ ರಾತ್ರಿ 8 ಗಂಟೆಯವರೆಗೂ ಧ್ವಜವೂ ಹಾಗೆಯೇ ಇತ್ತು ಎಂದು ಗ್ರಾಮೀಣ ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು ಒಟ್ಟಾಗಿ ಸೇರಿ ಧ್ವಜವನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಕೂಡಾ ಪೊಲೀಸರಿಗೆ ತಿಳಿಸಲಾಗಿದೆ.
ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯ ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.