ಕಾಸರಗೋಡು, ಆ 17 (DaijiworldNews/PY): ಮೀನುಗಾರಿಕೆ ಸಂದರ್ಭದಲ್ಲಿ ದೋಣಿ ಮಗುಚಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತನ ಮೃತದೇಹ ಸೋಮವಾರ ಪತ್ತೆಯಾಗಿದೆ.

ಮೃತರನ್ನು ಶಿರಿಯದ ಬಾಲಕೃಷ್ಣ (58) ಎಂದು ತಿಳಿದುಬಂದಿದೆ.
ಶುಕ್ರವಾರದಂದು ಮೀನುಗಾರಿಕೆ ಸಂದರ್ಭದಲ್ಲಿ ಘಟನೆ ನಡೆದಿದ್ದು, ಜೊತೆಯಲ್ಲಿದ್ದ ಇತರ ಐವರು ಪಾರಾಗಿದ್ದರು. ಮೀನುಗಾರರು, ಪೊಲೀಸರು ಶೋಧ ನಡೆಸಿದ್ದು, ಈ ನಡುವೆ ಇಂದು ಕುಂಬಳೆ ಕೊಯಿಪ್ಪಾಡಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.