ಪುತ್ತೂರು, ಆ. 18 (DaijiworldNews/MB) : ತಂದೆ ಮತ್ತು ಮಗನ ನಡುವೆ ಕಲಹ ಸಂಭವಿಸಿ ತಂದೆ ಸಾವನ್ನಪ್ಪಿದ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಬಾಲಯ ಸೋಮವಾರ ರಾತ್ರಿ ಎಂಬಲ್ಲಿ ನಡೆದಿದೆ.

ಮೃತರನ್ನು ಗಂಗಾಧರ್ ಎಂದು ಗುರುತಿಸಲಾಗಿದೆ.
ಪತ್ರ ಶಶಿಧರ್ ಹಾಗೂ ಗಂಗಾಧರ್ ಅವರ ನಡುವೆ ಕಳಹ ನಡೆದಿದ್ದು ತಂದೆ ಹಾಗೂ ಮಗ ಇಬ್ಬರೂ ಕೂಡಾ ಗಾಯಗೊಂಡಿದ್ದರು. ಇಬ್ಬರನ್ನೂ ಕೂಡಾ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಈ ಪೈಕಿ ತೀರಾ ಗಂಭೀರವಾಗಿ ಗಾಯಗೊಂಡ ತಂದೆ ಗಂಗಾಧರ್ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯವ ಸಂದರ್ಭದಲ್ಲೇ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಪುತ್ರ ಶಶಿಧರ್ ಅವರ ತಲೆಗೆ ಸಣ್ಣ ಮಟ್ಟಿನ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಸರಕಾರಿ ಆಸ್ಪತ್ರೆಗೆ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯ ರವಿ ಮತ್ತು ಸಿಬ್ಬಂದಿಗಳು ತೆರಳಿದ್ದಾರೆ.