ಕುಂದಾಪುರ,ಆ 19 (Daijiworld News/MSP): ಹೊಸಂಗಡಿ ಚಕ್ ಪೋಸ್ಟ್ ಅಮಾಸೆಬೈಲು ಪೊಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ಅನಿಲ್ಕುಮಾರ್ ಅವರು ವಾಹನ ತಪಾಸಣೆಯ ವೇಳೆಯಲ್ಲಿ ಹುಲಿಕಲ್ ಘಾಟಿಯಿಂದ ಹೊಸಂಗಡಿ ಕಡೆಗೆ ಬರುತ್ತಿರುವ ಟ್ರಕ್ ವಾಹನದಲ್ಲಿ ಅಕ್ರಮ ಗೋ ಸಾಗಣಿಕೆ ಪತ್ತೆ ಹಚ್ಚಿದ್ದಾರೆ.

ಉತ್ತರ ಪ್ರದೇಶ ನೊಂದಾವಣೆಯ ಟ್ರಕ್ನಲ್ಲಿ ಸುಮಾರು 37 ಕೋಣಗಳನ್ನು ಹಿಂಸ್ಮಾತಕವಾಗಿ ಕಟ್ಟಿಹಾಕಿ, ವಧೆ ಮಾಡುವ ಉದ್ದೇಶಕ್ಕಾಗಿ ಸಾಗಣಿಕೆ ಮಾಡುತ್ತಿದ್ದರು. ಪೊಲೀಸರು ವಾಹನ ಮತ್ತು ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಉತ್ತರ ಪ್ರದೇಶದ ಸಾಹಿರ್ ಜಿಲ್ಲೆಯ ಕಮಲಾಪುರದ ಶಕೀಲ್(35) ಮತ್ತು ಮೀರತ್ ಜಿಲ್ಲೆಯ ಪಕ್ರಿ ಆಲಂ (24)ನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.