ಮಂಗಳೂರು, ಆ. 19 (DaijiworldNews/MB) : ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಭವನದ ಮೇಲೆ ಕಲ್ಲುತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಧನ್ರಾಜ್, ಸುಶಾಂತ್, ಸಾಗರ್, ಕಾರ್ತಿಕ್, ಮನಿಷ್ ಹಾಗೂ ಇನ್ನೋರ್ವ ಬಾಲಕನಾಗಿದ್ದಾನೆ.
ಬಾಲಕನಿಗೆ ನ್ಯಾಯಾಲಯ ಜಾಮೀನು ನೀಡಿದ್ದು ಉಳಿದ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ನಗರದ ಪಾಂಡೇಶ್ವರದಲ್ಲಿರುವ ಕರ್ನಾಟಕ ಸರ್ಕಾರದ ಮೌಲಾನ ಅಝಾದ್ ಅಲ್ಪಸಂಖ್ಯಾತರ ಭವನದ ಮೇಲೆ ಕಲ್ಲುತೂರಾಟ ಮಾಡಿರುವ ಘಟನೆ ಆ.13 ರ ಗುರುವಾರ ತಡರಾತ್ರಿ ನಡೆದಿತ್ತು. ಕಲ್ಲು ತೂರಾಟ ನಡೆಸಿದ ಪರಿಣಾಮ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾಗಿರುವ ಗಾಜಿಗೆ ಹಾನಿಯಾಗಿತ್ತು.