ಮೂಡಿಗೆರೆ, ಆ. 20(DaijiworldNews/HR): ಕಾರು ನಿಲ್ಲಿಸಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಡಿ ಘಾಟಿನ ಮಲೆಯಮಾರುತ ಬಳಿ ನಡೆದಿದೆ.

ಕಾರಿನಲ್ಲಿ ಸಿಕ್ಕೆದ ದಾಖಲೆಗಳ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು ನಾಗರಾಜು( 44) ಎಂದು ಗುರುತಿಸಲಾಗಿದ್ದು, ಆತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆ ದೇವಪುರ ಗ್ರಾಮದವರು ಎಂದು ತಿಳಿದುಬಂದಿದೆ.
ಮಲೆಯಮಾರುತ ರಸ್ತೆ ಬಳಿ ಮಂಗಳವಾರ ಸಂಜೆಯಿಂದ ಕಾರು ನಿಂತಿದ್ದು, ಬುಧವಾರ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ವಿಷದ ಬಾಟಲಿ ರಸ್ತೆಯ ಪಕ್ಕದಲ್ಲಿ ಬಿದ್ದಿತ್ತು.
ಇನ್ನು ನಾಗರಾಜ್ ಬರೆದ ಡೆತ್ ನೋಟಿನಲ್ಲಿ ಗಿರೀಶ್ ಎಂಬಾತ ನನಗೆ 26 ಸಾವಿರ ರೂಪಾಯಿ ಹಣ ನೀಡಬೇಕಿದ್ದು, ನನ್ನ ಬೈಕ್ ಕೂಡಾ ಆತನಿಗೆ ಕೊಟ್ಟಿದ್ದೇನೆ. ಇನ್ನೊಂದೆಡೆ ನನ್ನ ಪತ್ನಿ 20 ದಿನಗಳ ಹಿಂದೆ ಸಾವನ್ನಪ್ಪಿದ್ದು ಅವಳನ್ನು ಬಿಟ್ಟು ನನಗೆ ಬದುಕಲು ಕಷ್ಟವಾಗಿತ್ತದೆ ಹಾಗಾಗಿ ಅವಳ ದಾರಿಗೆ ನಾನು ಹೋಗಿತ್ತೇನೆ ಎಂದು ಬರೆದುಕೊಂಡಿದ್ದರು.