ಮಂಗಳೂರು, ಆ. 20(DaijiworldNews/HR): ಮಂಗಳೂರು ನಗರದ ವಿಳಾಸ ಹೊಂದಿರುವ ವ್ಯಕ್ತಿಯೊಬ್ಬರು ಬರೋಬ್ಬರಿ 19.76 ಕೋಟಿ ರೂ ಮೊತ್ತದ ಚಿನ್ನಾಭರಣವನ್ನು ಮಂಗಳೂರಿನ ಸರಕಾರಿ ಸ್ವಾಮ್ಯದ ಬ್ಯಾಂಕ್ ಶಾಖೆಯೊಂದರಲ್ಲಿ ಅಡವಿಟ್ಟು ಸಾಲ ಮರುಪಾವತಿಸಿದೆ ಸುಸ್ತಿದಾರರಾಗಿರುವ ವಿಚಾರ ಪತ್ರಿಕೆಯಲ್ಲಿ ಪಕಟಿಸಿದ ಹರಾಜು ನೋಟೀಸ್ ನಿಂದ ಬೆಳಕಿಗೆ ಬಂದಿದೆ.

ಬಿಜೈ ನಿವಾಸಿಯಾಗಿರುವ ವ್ಯಕ್ತಿ, ಬರೋಬ್ಬರಿ 19.76 ಕೋಟಿ ಚಿನ್ನಾಭರಣ ಅಡವಿಟ್ಟು ಸಾಲ ಮರುಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣ ಚಿನ್ನಾಭರಣದ ಬಹಿರಂಗ ಹರಾಜು ಮಾಡುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಪ್ರಕಟಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಷ್ಟೊಂದು ಪ್ರಮಾಣದ ಬಂಗಾರ ಆತನ ಬಳಿ ಬಂದಿದ್ದು ಹೇಗೆ.? ಅಂದು ಇಟ್ಟ ಚಿನ್ನದ ಇಂದಿನ ಮಾರುಕಟ್ಟೆ ಮೌಲ್ಯ ಇಂದು ಎಷ್ಟಾಗಿರಬಹುದು.? ಹೀಗೆ ಸಾರ್ವಜನಿಕ ವಲಯದಲ್ಲಿ ಗುಸುಗುಸು ಚರ್ಚೆ ಶುರುವಾಗಿದೆ
ಚಿನ್ನವನ್ನು ಅಡವಿಟ್ಟ ವ್ಯಕ್ತಿಯು ನಗರದ ಪಣಂಬೂರಿನ ಬ್ಯಾಂಕ್ ಒಂದರಲ್ಲಿ ಒಟ್ಟು 10 ಖಾತೆ ಸಂಖ್ಯೆಗಳಲ್ಲಿ ಸಾಲ ಪಡೆದಿದ್ದುಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಚಿನ್ನವನ್ನು ಗಿರವಿ ಇಟ್ಟು ಸಾಲ ಪಡೆದಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.