ಮಂಜೇಶ್ವರ, ಆ 20 (DaijiworldNews/PY): ಮೂವರು ಸಹೋದರಿಯರು ನಿಗೂಢವಾಗಿ ಕಾಣೆಯಾಗಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಮೂವರೂ ಸಹೋದರಿಯರೂ ಕೂಡಾ ಮಿಯಪದವು ನಿವಾಸಿಗಳಾಗಿದ್ದು, 16, 17 ಹಾಗೂ 21 ವಯಸ್ಸಿನವರಾಗಿದ್ದಾರೆ. ಆಗಸ್ಟ್ 16ರಂದು ಮೂವರು ಆಸ್ಪತ್ರೆಗೆ ಹೋದವರು ಇನ್ನೂ ಕೂಡಾ ಹಿಂತಿರುಗಲಿಲ್ಲ ಎಂದು ಹೇಳಲಾಗಿದೆ.
ಮೂವರು ಸಹೋದರಿಯರಲ್ಲಿ ಓರ್ವ ಸಹೋದರಿಯ ಬಳಿ ಇತ್ತೀಚೆಗೆ ಮೊಬೈಲ್ ಫೋನ್ ಕಂಡುಬಂದಿತ್ತು. ಮೊಬೈಲ್ ಫೋನ್ ಬಗ್ಗೆ ಪೋಷಕರು ಪ್ರಶ್ನಿಸಿದಾಗ ಆಕೆ ಉತ್ತರಿಸಲಿಲ್ಲ.
ಇದಾದ ಬಳಿಕ ಮೂವರು ಸಹೋದರಿಯರು ನಿಗೂಢವಾಗಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಸಹೋದರಿಯರನ್ನು ಪತ್ತೆ ಹಚ್ಚಲು ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಯುತ್ತಿದೆ.