ಹುಬ್ಬಳ್ಳಿ, ಏ 29: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಬ್ಬಳ್ಳಿಗೆ ಗುರುವಾರ ಬಂದಿಳಿದ ವಿಮಾನದಲ್ಲಿ ತಾಂತ್ರಿಕ ದೋಷದ ಕುರಿತು ತಜ್ಞರ ತಂಡ ಏ . 28 ರ ಶನಿವಾರ ಅಗತ್ಯ ಮಾಹಿತಿ ಸಂಗ್ರಹಿಸಿತು.
ಸಾಂದರ್ಭಿಕ ಚಿತ್ರ
ನವದೆಹಲಿಯಿಂದ ಬಂದ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಉಪನಿರ್ದೇಶಕ ತಂಡವು ರನ್ ವೇ ನಲ್ಲಿ ವಿಮಾನವನ್ನು ನಾಲ್ಕೈದು ಬಾರಿ ಓಡಿಸಿತು. ಬಳಿಕ ಬ್ಲ್ಯಾಕ್ ಬಾಕ್ಸ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಕ್ಕೆ ಪಡೆಯಿತು.
ವಿಮಾನವು ಸಧ್ಯ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೇ ನಿಂತಿದೆ ತಾಂತ್ರಿಕ ಪರಿಶೀಲನೆಯ ಬಳಿಕವಷ್ಟೇ ವಿಮಾನ ಹೋರಾಟಕ್ಕೆ ಒಪ್ಪಿಗೆ ದೊರೆಯುವುದು ಎಂದು ತಿಳಿದು ಬಂದಿದೆ.