ಉಡುಪಿ, ಆ. 20 (DaijiworldNews/SM): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಗುರುವಾರ ಮತ್ತೆ 349 ಮಂದಿಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 9383ಕ್ಕೆ ಏರಿಕೆಯಾಗಿದೆ.

ಕೋವಿಡ್ ನಿಂದಾಗಿ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಸಾವನ್ನಪ್ಪಿದ್ದಾರೆ. ಕಾರ್ಕಳ ತಾಲೂಕಿನ 56 ವರ್ಷದ ಮಹಿಳೆ ಮೃತಪಟ್ಟಿದ್ದು, ಉಡುಪಿ ತಾಲೂಕಿನ 69 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಇಂದು ಪತ್ತೆಯಾದ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 130 ಮಂದಿಗೆ ಸೊಂಕು ತಗುಲಿದೆ. 137 ಮಂದಿಯಲ್ಲಿ ಐಎಲ್ ಐ ಪ್ರಕರಣಗಳು ದೃಢಪಟ್ಟಿವೆ, 12 ಸಾರಿ ಪ್ರಕರಣ ಪತ್ತೆಯಾಗಿವೆ. ಈ ನಡುವೆ 63 ಮಂದಿಯ ಸೊಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ರಾಜ್ಯ ಪ್ರಯಾಣದಿಂದ 6 ಮಂದಿಗೆ ಸೋಂಕು ಪತ್ತೆಯಾಗಿದೆ. ಅಂತರಾಷ್ಟ್ರೀಯ ಪ್ರಯಾಣದಿಂದ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ. ಸದ್ಯ ಜಿಲ್ಲಯಲ್ಲಿ 2818 ಸಕ್ರಿಯ ಪ್ರಕರಣಗಳಿವೆ.