ವಿಟ್ಲ, ಆ.20 (DaijiworldNews/SM): ಇಲ್ಲಿನ ಅಳಿಕೆ ಗ್ರಾಮದ ಎರುಂಬು ಎಂಬಲ್ಲಿ ದಾರಿ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರು ಆರೋಪಿಗಳು ರಿವಾಲ್ವಾರ್ ನಲ್ಲಿ ಗುಂಡಿಕ್ಕಿ ಕೊಲೆ ನಡೆಸುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಳಿಕೆ ಗ್ರಾಮದ ಎರುಂಬು ಮೂಡಯಿಬೆಟ್ಟು ನಿವಾಸಿ ರಾಮಚಂದ್ರ ಬಲ್ಲಾಳ್ ಅವರಿಗೆ ಬೆದರಿಕೆಯೊಡ್ಡಲಾಗಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದವರು. ಅಳಿಕೆ ಗ್ರಾಮದ ಎರುಂಬು ಮೂಡಯಿಬೆಟ್ಟು ನಿವಾಸಿಗಳಾದ ಉದನೇಶ್ವರ ಭಟ್, ಆದರ್ಶ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಸರ್ಕಾರಿ ಜಾಗದ ಮೂಲಕ ರಸ್ತೆ ಹಾದು ಹೋಗುತ್ತಿದ್ದು, ಈ ರಸ್ತೆಯನ್ನು ರಾಮಚಂದ್ರ ಬಲ್ಲಾಳ್ ಅವರು ರಸ್ತೆ ದುರಸ್ಥಿಗೊಳಿಸುತ್ತಿರುವ ಸಂದರ್ಭದಲ್ಲಿ ಆರೋಪಿಗಳಾದ ಉದನೇಶ್ವರ ಭಟ್ ಮತ್ತು ಆದರ್ಶ್ ರವರು ಕಬ್ಬಿಣದ ರಾಡ್ ಮತ್ತು ಕತ್ತಿಯನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ರಿವಾಲ್ವಾರ್ ತಂದು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.