ಮಂಗಳೂರು, ಆ. 20 (DaijiworldNews/SM): ನಗರದ ಕೆಪಿಟಿ ಬಳಿ ಗುರುವಾರ ಸಂಭವಿಸಿದ ಅಪಘಾತವೊಂದರಲ್ಲಿ ಲಾರಿ ಹಾಗೂ ಎರಡು ಕಾರುಗಳು ಜಖಂಗೊಂಡಿವೆ. ಕಾರು ಕೆಪಿಟಿಯಿಂದ ಕುಂಟಿಕಾನಕ್ಕೆ ತೆರಳುತ್ತಿತ್ತು. ಈ ಕಾರಿನ ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ.









ಅತಿಯಾದ ವೇಗದಿಂದಾಗಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ನುಗ್ಗಿ, ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಮಾತ್ರವಲ್ಲದೆ, ಮತ್ತೊಂದು ಕಾರಿಗೂ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ಕಾರುಗಳಲ್ಲಿ ಒಂದು ಕಾರು ಜೊಸ್ಸಿ ವಿನ್ಸೆಂಟ್ ಪಿಂಟೊಗೆ ಸೇರಿದ್ದು, ಅವರು ಜಿಲ್ಲಾ ಪಂಚಾಯತ್ನಿಂದ ಪಚನಾಡಿಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಪಚನಾಡಿಯ ಜೋಸ್ಸಿ ವಿನ್ಸೆಂಟ್ ಪಿಂಟೊ, ಕಾಟಿಪಲ್ಲಾದ ಮಜೆನ್ ಮನ್ಸೂರ್ ಮತ್ತು ಅಹ್ಮದ್ ಸೇರಿದ್ದು ಮತ್ತೊಬ್ಬ ಲಾರಿ ಚಾಲಕನಾಗಿದ್ದಾನೆ.
ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.