ಮಂಗಳೂರು, ಏ.29: ಲಾರಿ ಮತ್ತು ದ್ವಿ ಚಕ್ರ ವಾಹನದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಪಂಪವೆಲ್ ನಲ್ಲಿ ಏ . 29 ರ ಭಾನುವಾರ ಬೆಳಗ್ಗೆ ನಡೆದಿದೆ.

.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
ಸರಕು ಸಾಗಾಟ ಮಾಡುವ ಲಾರಿಯೂ ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದು, ಇದೇ ದಾರಿಯಾಗಿ ದ್ವಿಚಕ್ರ ವಾಹನದಲ್ಲಿ ತೊಕ್ಕೊಟ್ಟು ಸಮೀಪದ ಕುಂಪಲ ನಿವಾಸಿಗಳಾದ ಪ್ರೀಶನ್ (22) ಹಾಗೂ ಅಕ್ಷಯ್ (26) ಬರುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಹೊಂಡದಿಂದಾಗಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಇವರಿಬ್ಬರ ಮೇಲೆ ಸಾಗಿದೆ. ಪರಿಣಾಮ ಅಕ್ಷಯ್ ಸ್ಥಳದಲ್ಲೇ ಸಾವನಪ್ಪಿದ್ದು, ಗಾಯಾಳು, ಪ್ರೀಶನ್ ನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ಹಿನ್ನಲೆಯಲ್ಲಿ ಪಂಪ್ ವೆಲ್ ಸರ್ಕಲ್ ಬಳಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರಾಫಿಕ್ ಅನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ಕಾಮಗಾರಿ ಆರಂಭವಾಗಿ 8 ವರ್ಷ ಮುಗಿದಿದ್ದರೂ ಇಲ್ಲಿನ ಪ್ಲೈಓವರ್ ಕೆಲಸ ಇನ್ನು ಪೂರ್ಣಗೊಳ್ಳದೆ ಇರುವುದರಿಂದ ಇದು ಅಪಘಾತವಲಯವಾಗಿ ಮಾರ್ಪಟ್ಟು ಹಲವು ಜೀವಗಳನ್ನು ಬಲಿಪಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸೂಕ್ತವಾಗಿ ಸ್ಪಂದಿಸದೇ ಇರೋದು, ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.