ಮಂಗಳೂರು, ಆ.21 (DaijiworldNews/HR): ಪಂಪ್ ವೆಲ್ ನ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪರ ಮೇಲೆ ಪೊಲೀಸರು ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಪುತ್ತೂರು ನಿವಾಸಿ ಸಾಗರ್ (40) ಮತ್ತು ಕಡಂದಲೆ ಹರೀಶ್ ಶೆಟ್ಟಿ (45) ಬಂಧಿತ ಆರೋಪಿಗಳಾಗಿದ್ದಾರೆ.
ಪೊಲೀಸರು ಖಚಿತ ಮಾಹಿತಿಯ ಮೆರೆಗೆ ಲಾಡ್ಜ್ ಗೆ ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಹರೀಶ್ ಶೆಟ್ಟಿ ಲಾಡ್ಜ್ ಸಿಬ್ಬಂದಿ ಆಗಿದ್ದು ಸಾಗರ್ ದಲ್ಲಾಳಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಕದ್ರಿ ಠಾಣೆ, ಸಿಸಿಬಿ ಮತ್ತು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದರು.