ಬೆಂಗಳೂರು, ಸೆ 22: ರಾಜ್ಯದಾದ್ಯಂತ ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದ್ದ ಆದಾಯ ತೆರಿಗೆ ಅಧಿಕಾರಿ ನಿರಂಜನ್ ಅವರ ಪುತ್ರ ಶರತ್(19)ಕಿಡ್ನಾಪ್ ಪ್ರಕರಣ ಬೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಈ ಪ್ರಕರಣವನ್ನು ಬೇಧಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್ ಸ್ನೇಹಿತ ವಿಶಾಲ್ ಹಾಗೂ ಇತರ ಆರೋಪಿಗಳ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.
ಸ್ನೇಹಿತರಿಂದಲೇ ಕೊಲೆಯಾದ
ಸೆ. 12ರಂದು ಅಪಹರಣಕ್ಕೊಳಗಾಗಿದ್ದ ಐಟಿ ಅಧಿಕಾರಿ ಪುತ್ರ ಶರತ್, ಅಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮನೆಯವರಿಗೆ ಸೆಲ್ಫಿ ವಿಡಿಯೋವೊಂದನ್ನು ರವಾನಿಸಿ ತನ್ನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದಾಗಿ ತಿಳಿಸಿದ್ದ. ಅಲ್ಲದೆ, ಪೊಲೀಸರಿಗೆ ದೂರು ನೀಡಬಾರದು. ಅಪಹರಣಕಾರರಿಗೆ 50 ಲಕ್ಷ ರು. ಹಣ ನೀಡಿ ತನ್ನನ್ನು ಬಿಡಿಸಿಕೊಂಡು ಹೋಗುವಂತೆ ಕೋರಿದ್ದ
ಆದರೆ, ಸೆ. 14ರಂದು ನಿರಂಜನ್ ಅವರು ಜ್ಞಾನಭಾರತೀ ಪೊಲೀಸ್ ಠಾಣೆಯಲ್ಲಿ ತಮ್ಮ ಮಗನ ಅಪಹರಣದ ಬಗ್ಗೆ ದೂರು ದಾಖಲಿಸಿದ್ದರು. ಇದನ್ನು ಅರಿತ ಆರೋಪಿಗಳು ಹೆದರಿ, ಶರತ್ ನನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿರುವುದಾಗಿ ಮಾದ್ಯಮ ಮೂಲಗಳು ತಿಳಿಸಿವೆ.ಶರತ್ ಅಕ್ಕನಿಗೆ ಫೋನ್ ಮಾಡಿದ್ದ ವಿಶಾಲ್, ಪೊಲೀಸರಿಗೆ ದೂರು ಕೊಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡಿದ್ದ. ಆನಂತರವೇ ಶರತ್ ಕೊಲೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಅಪಹರಣದ ನಂತರ, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಈ ಆರೋಪಿಗಳು ಯತ್ನಿಸಿದ್ದರೆಂದು ಆರೋಪಿಸಲಾಗಿದೆ..ಶರತ್ ನನ್ನು ಕೊಲೆ ಮಾಡಿ ಆ ಬಳಿಕ ಶವದೊಂದಿಗೆ ದಿನವಿಡೀ ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ದಿನವಿಡಿ ಸುತ್ತಾಡಿ ಅಂದು ರಾತ್ರಿ ಶವ ತೇಲಬಾರದೆಂಬ ಉದ್ದೇಶದಿಂದ ಕಲ್ಲು ಕಟ್ಟಿ ಕೆರೆಯೊಂದಲ್ಲಿ ಹಾಕಿ ಪರಾರಿಯಾಗಿದ್ದರು.ಅಪಹರಣದ ನಂತರ, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಈ ಆರೋಪಿಗಳು ಯತ್ನಿಸಿದ್ದರೆಂದು ಆರೋಪಿಸಲಾಗಿದೆ.ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ವಿಶಾಲ್ , ವಿನಯ್, ವಿಕ್ಕಿ, ಕಿರಣ್, ಕರ್ಣ, ಶಾಂತ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ