ಕಾಸರಗೋಡು,ಆ. 21 (DaijiworldNews/HR): ತುಂಡಾಗಿ ಬಿದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರ್ಕಾಡಿ ಕೋಳಿಯೂರು ಬೋಳಂತಕೋಡಿ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಆಟೋ ಚಾಲಕ ವಿಶ್ವನಾಥ ರವರ ಪತ್ನಿ ವಿಜಯ (35) ಮತ್ತು ಪುತ್ರ ಆಶ್ರಯ್( 6) ಎಂದು ಗುರುತಿಸಲಾಗಿದೆ .
ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮನೆ ಬಳಿ ಕಡಿದು ಬಿದ್ದಿದ್ದ ತಂತಿಯನ್ನು ಸ್ಪರ್ಶಿಸಿದ ಆಶ್ರಯ್ ಗೆ ಶಾಕ್ ತಗಲಿದ್ದು, ಮಗುವನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ತಾಯಿಗೂ ಶಾಕ್ ತಗಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.