ಮಂಗಳೂರು, ಏ.29: ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಸರ್ಕಾರದ ಬಗ್ಗೆ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟ ಸರ್ಕಾರ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡ ಹೇಳಿದ್ದಾರೆ. ಏ. 29ರ ಭಾನುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಧಾನ ಸಭಾ ಚುನಾವಣೆ, ದೇಶದ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂದರು. ಕಾಂಗ್ರೆಸ್ ಅತ್ಯುತ್ತಮ ಚುನಾವಣಾ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದ್ದು ಇದಕ್ಕಾಗಿ ಈ ಹಿಂದೆ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ವೀರಪ್ಪ ಮೊಯ್ಲಿ, ಹಾಗೂ ಹಲವು ಹಿರಿಯ ನಾಯಕರ ನೇತೃತ್ವದಲ್ಲಿ ಇದನ್ನು ತಯಾರಿಸಲಾಗಿದೆ. ನಾನು ಕೂಡಾ ಪ್ರಣಾಳಿಕೆ ತಯಾರಿಕೆ ಸಂದರ್ಭದಲ್ಲಿ ಒಂದಿಷ್ಟು ಸಲಹೆ ನೀಡಿದ್ದೇನೆ ಎಂದರು. ಪ್ರಣಾಳಿಕೆಯಲ್ಲಿ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ, ರೈತರ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಯಾಮ್ ತಿಳಿಸಿದರು.
70 ವರ್ಷಗಳಿಂದ ಭಾರತ ಅಭಿವೃದ್ದಿಯನ್ನೇ ಕಾಣಲಿಲ್ಲ ಎಂದು ಟೇಕೆ ಮಾಡುವ ಜನಗಳು ದೇಶದ ಜನರನ್ನು ಅವಮಾನಿಸುತ್ತಿದ್ದಾರೆ. ಶಿಶು ಮರಣದ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬೆಂಗಳೂರು ವಿಶ್ವದ ಐ.ಟಿ ಕೇಂದ್ರವಾಗಿದ್ದು, ಸಿಲಿಕಾನ್ ವ್ಯಾಲಿ ಎಂಬ ಹೆಸರು ಗಳಿಸಿರುವುದು ಇದೆಲ್ಲ ಸಾಧನೆ, ಅಭಿವೃದ್ಧಿಯಲ್ಲವೇ ಎಂದು ಅವರು ಪ್ರಶ್ನಿಸಿದರು.
ಇದೇ ಸಂದರ್ಭ ಪತ್ರಿಕಾಗೋಷ್ಟಿಯಲ್ಲಿ ಎಐಸಿಸಿ ಮುಖಂಡರಾದ ಮಂಜುನಾಥ ಭಂಡಾರಿ,ದ.ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಸುರೇಶ್ ಶೆಟ್ಟಿ, , ನವೀನ್ ಡಿಸೋಜ, ದ.ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.