ಉಡುಪಿ, ಆ. 21, (DaijiworldNews/SM): ಜಿಲ್ಲೆಯಲ್ಲಿ ಇಂದು 278 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 9661ಕ್ಕೆ ಏರಿಕೆ ಯಾಗಿದೆ.

ಪ್ರಾಥಮಿಕ ಸಂಪರ್ಕದಿಂದ 114 ಮಂದಿಗೆ ಸೊಂಕು ದೃಢಪಟ್ಟಿದೆ. 68 ಮಂದಿಯಲ್ಲಿ ಐಎಲ್ಐ ಪ್ರಕರಣ ದೃಢಪಟ್ಟಿದೆ. 6 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ.
89 ಮಂದಿಯ ಸಂಪರ್ಕದ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ರಾಜ್ಯ ಪ್ರಯಾಣ ಮುಗಿಸಿ ಬಂದ ಒಬ್ಬರಲ್ಲಿ ಸೊಂಕು ಪತ್ತೆಯಾಗಿದೆ.
ಇಂದು ಜಿಲ್ಲೆಯಲ್ಲಿ ಕೊವಿಡ್ ನಿಂದಾಗಿ ಇಬ್ಬರು ಮರಣ ಹೊಂದಿದ್ದಾರೆ. ಕುಂದಾಪುರ ತಾಲೂಕಿನ 61 ವರ್ಷದ ಪುರುಷ ಮತ್ತು ಉಡುಪಿ ತಾಲೂಕಿನ 80 ವರ್ಷದ ವ್ಯಕ್ತಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಸದ್ಯ ಜಿಲ್ಲೆಯಲ್ಲಿ 2729 ಸಕ್ರಿಯ ಪ್ರಕರಣಗಳಿವೆ.