ಮಂಗಳೂರು, ಆ 22 (DaijiworldNews/PY): ಗಣೇಶ ಚತುರ್ಥಿಯಂದು ಪ್ರಕೃತಿಯಲ್ಲೇ ಕಂಡ ಗಣಪತಿಯ ರೂಪವನ್ನು ಹವ್ಯಾಸಿ ಛಾಯಾಗ್ರಾಹಕ ವಿಶಾಲ್ ವಾಮಂಜೂರು ಅವರು ಸೆರೆಹಿಡಿದಿದ್ದು, ಹಲವು ಫೋಟೋಗ್ರಾಫರ್ಗಳಿಗೆ ಸ್ಫೂರ್ತಿ ತುಂಬಿದ್ದಾರೆ.


ಮಂಗಳೂರಿನ ಹೊರವಲಯದ ವಾಮಂಜೂರಿನ ಕೆತ್ತಿಕಲ್ನಲ್ಲಿ ಪ್ರಕೃತಿದತ್ತ ಗಣಪ ಕಂಡುಬಂದಿದ್ದು, ಈಂದು ಮರದ ಮೇಲೆ ಪೊದೆ ಬಳ್ಳಿಗಳು ಬೆಳೆದು ಈ ಪ್ರಕೃತಿ ಗಣಪ ರೂಪುಗೊಂಡಿದ್ದಾನೆ.
ಫೋಟೋಗ್ರಾಫರ್ ಕಣ್ಣಿಗೆ ಕಂಡ ಅದ್ಭುತಕ್ಕೆ ಜನರು ಫಿದಾ ಆಗಿದ್ದು, ಚೌತಿಯ ದಿನದಂದು ಪ್ರಕೃತಿ ಗಣಪ ಫುಲ್ ವೈರಲ್ ಆಗುತ್ತಿದ್ದಾನೆ.
ಈ ಗಣಪತಿ ಪ್ರಕೃತಿಯಲ್ಲೇ ರೂಪು ಪಡೆದಿದ್ದು, ಮರ, ಗಿಡ, ಬಳ್ಳಿಯಿಂದ ಆವೃತ್ತವಾಗಿದೆ. ವಿಶಾಲ್ ಅವರ ಫೋಟೋಗ್ರಫಿ ಬಳಿಕ ಈ ಪ್ರಕೃತಿ ಗಣಪನನ್ನು ಕಣ್ತುಂಬಿಸಿಕೊಳ್ಳಲು ಜನರು ಬರುತ್ತಿದ್ದಾರೆ. ಅಲ್ಲದೇ, ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಅರಳಿದ ಗಣಪನನ್ನು ಕಂಡ ಜನ ಭಕ್ತಿ-ಭಾವದಿಂದ ನಮಿಸಿದ್ದು, ಗಣಪತಿ ಬಪ್ಪಾ ಮೋರಯಾ ಎನ್ನುತ್ತಿದ್ದಾರೆ.