ಕಾಸರಗೋಡು, ಆ. 22 (DaijiworldNews/MB) : ದೋಣಿ ಮಗುಚಿ ಓರ್ವ ಮೃತಪಟ್ಟು, ಮೂವರು ಅಪಾಯದಿಂದ ಪಾರಾದ ಘಟನೆ ಇಂದು ಮುಂಜಾನೆ ಚಂದ್ರಗಿರಿ ನದಿಯ ಪೆರುಂಬಳ ಸೇತುವೆ ಬಳಿ ನಡೆದಿದೆ.

ಮೃತಪಟ್ಟವರನ್ನು ಪೆರುಂಬಳ ಚಿರುವಾದುಕಲ್ ನ ನಿಯಾಜ್ (23) ಎಂದು ಗುರುತಿಸಲಾಗಿದೆ.
ದೋಣಿ ಮಗಚಿ ನೀರುಪಾಲಾಗಿದ್ದ ನಿಯಾಜ್ಗಾಗಿ ಅಗ್ನಿಶಾಮಕದಳದ ಸಿಬಂದಿಗಳು, ನಾಗರಿಕರು ಶೋಧ ನಡೆಸಿದ್ದು, ಇಂದು ಸಂಜೆ ಘಟನೆ ನಡೆದ ಸ್ಥಳದ ಅಲ್ಪ ದೂರ ಮೃತದೇಹ ಪತ್ತೆಯಾಗಿದೆ.
ದೋಣಿಯಲ್ಲಿದ್ದ ನಾಲ್ವರ ಪೈಕಿ ಮೂವರು ಈಜಿ ದಡ ಸೇರಿದರೂ ನಿಯಾಜ್ ನೀರುಪಾಲಾಗಿದ್ದನು . ಹೊಳೆಯಿಂದ ಮೀನು ಹಿಡಿದು ಮರಳುತ್ತಿದ್ದಾಗ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದು ದೋಣಿ ಮಗುಚಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ವಿದ್ಯಾ ನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.