ಉಡುಪಿ, ಆ. 22 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ 348 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಉಡುಪಿ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

ಜಿಲ್ಲೆಯಲ್ಲಿ ಶನಿವಾರ 348 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ10009 ಕ್ಕೆ ಏರಿಕೆಯಾಗಿದೆ.
178 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, 42 ಐಎಲ್ಐ, 2 ಸಾರಿ ಪ್ರಕರಣವಾಗಿದೆ. ಇಬ್ಬರು ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಇನ್ನೂ 124 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದೆ. ಇಂದು ಉಡುಪಿ ತಾಲೂಕಿನಲ್ಲಿ 165, ಕುಂದಾಪುರದಲ್ಲಿ 132, ಕಾರ್ಕಳ ತಾಲ್ಲೂಕಿನಲ್ಲಿ 46 ಪ್ರಕರಣ ಪತ್ತೆಯಾಗಿದೆ. ಹಾಗೆಯೇ ಐವರು ಇತರೆ ಜಿಲ್ಲೆಯವರಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಶನಿವಾರ ಯಾವುದೇ ಕೊರೊನಾ ಸಾವು ಪ್ರಕರಣಗಳು ದಾಖಲಾಗಿಲ್ಲ. ಈವರೆಗೂ 82 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇನ್ನು ಇಂದು 975 ವರದಿ ನೆಗೆಟಿವ್ ಆಗಿದ್ದು ಪ್ರಸ್ತುತ 2842 ಸೋಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.