ಬ್ರಹ್ಮಾವರ, ಆ. 22 (DaijiworldNews/MB) : ಆಗಸ್ಟ್ 22 ರ ಶನಿವಾರದಂದು ಉಡುಪಿ ಡಿಸಿಐಬಿ ಪೊಲೀಸರು 49 ಕೆಜಿ ಗಾಂಜಾವನ್ನು ಹೇರೂರು ಬಳಿ ವಶಕ್ಕೆ ಪಡೆದಿದ್ದಾರೆ.






ಗಾಂಜಾ ಸಾಗಾಟಕ್ಕಾಗಿ ವಿವಿಧ ಮಾರ್ಗಗಳನ್ನು ಬಳಸುತ್ತಿರುವ ಗಾಂಜಾ ಸಾಗಾಟಗಾರರು ಇದೀಗ ಬಿದಿರಿನ ಒಳಗೆ ಬರೋಬ್ಬರಿ 49 ಕೆಜಿ ಗಾಂಜಾ ಇರಿಸಿ ಕಂಟೇನರ್ ಲಾರಿಯಲ್ಲಿ ಸಾಗಾಟ ಮಾಡುವ ಯತ್ನ ಮಾಡಿದ್ದಾರೆ.
49 ಕೆಜಿ ಗಾಂಜಾವನ್ನು ಉತ್ತರ ಪ್ರದೇಶದಿಂದ ಕರಾವಳಿ ಕರ್ನಾಟಕಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪೊಲೀಸರಿಗೆ ದೊರೆತ ಮಾಹಿತಿ ಆಧಾರದಲ್ಲಿ, ಡಿಸಿಐಬಿ ಪೊಲೀಸರು ಹೇರೂರಿನಲ್ಲಿ ಕಂಟೇನರ್ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ದೊಡ್ಡ ಪ್ರಮಾಣದ ಬಿದಿರಿನ ಚಿಗುರುಗಳಲ್ಲಿ ಗಾಂಜಾವನ್ನು ಅಡಗಿಸಿಟ್ಟು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಲಾರಿ ಚಾಲಕ ಮತ್ತು ಆತನ ಸಹಚರನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ, ಎಎಸ್ಐ ರವಿಚಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ದಯಾನಂದ್, ರಾಜ್ಕುಮಾರ್, ಚಂದ್ರ ಶೆಟ್ಟಿ, ಸುರೇಶ್, ರಾಘವೇಂದ್ರ ಮತ್ತು ಶಿವಾನಂದ ಬಂಧನ ಕಾರ್ಯಾಚರಣೆಯ ಭಾಗವಾಗಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ.