ಬೆಂಗಳೂರು, ಏ : ಕಳೆದ ಮಾರ್ಚ್ 1 ರಿಂದ 17 ರವರೆಗೆ ನಡೆಸಿದ್ದ 2017-18 ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.59.56 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ, ಒಟ್ಟಾರೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ್ಉಡುಪಿ ದ್ವಿತೀಯ , ಕೊಡಗು ತೃತೀಯ ಸ್ಥಾನ ಪಡೆದುಕೊಂಡಿದೆ.
ಏ.30 ರಂದು ದ್ವಿತೀಯ ಪಿ.ಯು.ಸಿ. ಪರೀಕ್ಷೆ ಫಲಿತಾಂಶದ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ, ಪಿ.ಯು ಮಂಡಳಿ ನಿರ್ದೇಶಕಿ ಸಿ. ಶಿಖಾ ಫಲಿತಾಂಶ ಪ್ರಕಟಿಸಿ ಮಾತನಾಡಿದರು. ಚಿಕ್ಕೋಡಿ ಜಿಲ್ಲೆ ರಾಜ್ಯಕ್ಕೆ ಕೊನೆಯ ಸ್ಥಾನವನ್ನು ಪಡೆದಿದ್ದು, ರಾಜ್ಯದಲ್ಲಿ ಒಟ್ಟು 118 ಕಾಲೇಜುಗಳು ಶೂನ್ಯ ಪಲಿತಾಂಶವನ್ನು ಪಡೆದುಕೊಂಡಿದೆ ಎಂದರು. ಈ ವರ್ಷ ಪರೀಕ್ಷೆಗೆ ಕುಳಿತಿದ್ದ 6 ಲಕ್ಷದ 85ಸಾವಿರದ 712 ವಿದ್ಯಾರ್ಥಿಗಳ ಪೈಕಿ 4,08,421 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇಕಡ 45.13, ವಿಜ್ಞಾನ ವಿಭಾಗದಲ್ಲಿ 63.64%, ವಾಣಿಜ್ಯ ವಿಭಾಗ 67.48% ಫಲಿತಾಂಶ ದಾಖಲಾಗಿದ್ದು, 68 ಕಾಲೇಜು ಪ್ರತಿಶತ 100 ಶೇಕಡಾ ಫಲಿತಾಂಶ ಪ್ರಕಟವಾಗಿದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಜೂನ್ 8ರಿಂದ 20ರ ವರೆಗೆ ನಡೆಸಲಾಗುವುದು. ಪರೀಕ್ಷಾ ಶುಲ್ಕ ಪಾವತಿಗೆ ಮೇ 15 ಕೊನೆಯ ದಿನವಾಗಿದೆ.
ತೇರ್ಗಡೆಯಾದವರು
ಉನ್ನತ ಶ್ರೇಣಿ- 54,692
ಪ್ರಥಮ ದರ್ಜೆ- 2,13,611
ದ್ವಿತೀಯ – 82,532
ತೃತೀಯ ದರ್ಜೆ- 57,586
ಗರಿಷ್ಠ ಅಂಕ ಪಡೆದವರು
ವಿಜ್ಞಾನ ವಿಭಾಗ
1.ಕೃತಿ ಮುಟ್ಟಗಿ -597: ಸರ್ದಾರ ಪಟೇಲ್ ಪಿ.ಯು ಕಾಲೇಜು ಬೆಂಗಳೂರು
2.ಅಂಕಿತಾ -595: ಗೋವಿಂದದಾಸ್ ಪಿ.ಯು ಕಾಲೇಜು ಸುರತ್ಕಲ್
2.ಎಸ್.ಎಲ್.ಮೋಹನ್ -595: ಮಾಸ್ಟರ್ಸ್ ಕಾಲೇಜು ಹಾಸನ
ಕಲಾ ವಿಭಾಗ
1.ಸ್ವಾತಿ ಕೊಟ್ಟಪ್ಪ -595 : ಇಂದೂ ಪಿಯು ಕಾಲೇಜು ಬಳ್ಳಾರಿ
2.ರಮೇಶ್ -593 : ಇಂದೂ ಪಿಯು ಕಾಲೇಜು ಬಳ್ಳಾರಿ
3.ಗೊರವರ ಕಾವ್ಯಾಂಜಲಿ-588: ಇಂದೂ ಪಿಯು ಕಾಲೇಜು ಬಳ್ಳಾರಿ
ವಾಣಿಜ್ಯ ವಿಭಾಗ
1.ವರ್ಷಿಣಿ ಎಂ.ಭಟ್ -595 : ಮಲ್ಲೇಶ್ವರಂ ವಿದ್ಯಾ ಮಂದಿರ, ಬೆಂಗಳೂರು
1.ಅಮೃತಾ -595: ರಾಜಾಜಿನಗರ ಎಎಸ್ ಸಿ ಕಾಲೇಜು
2.ಪೂರ್ವಿತಾ -594 : ಮೌಂಟ್ ಕಾರ್ಮೆಲ್ ಪಿಯು ಕಾಲೇಜು ಬೆಂಗಳೂರು
ಫಲಿತಾಂಶದ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://karresults.nic.in/
http://164.100.80.20/puc18_02/