ಮಂಗಳೂರು ಏ.30: ಏ. 29 ರಂದು ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸಾವನಪ್ಪಿದ್ದ ಘಟನೆಗೆ ಸಂಬಂಧಪಟ್ಟಂತೆ, ಇದೀಗ ಪೊಲೀಸರು ಲಾರಿ ಚಾಲಕನ ಜತೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಫ್ಲೈ ಓವರ್ ಕಾಮಗಾರಿ ಗುತ್ತಿಗೆದಾರರ ವಿರುದ್ದವೂ ಕೇಸು ದಾಖಲಿಸಿದ್ದಾರೆ. ವ್ಯವಸ್ಥಿತ ಮತ್ತು ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡದೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಮತ್ತು ಕಾಮಗಾರಿಯ ಗುತ್ತಿಗೆದಾರರು ನಿರ್ಲಕ್ಷ್ಯ ತಳೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪಂಪ್ ವೆಲ್ - ಎಕ್ಕೂರು ನಡುವಿನ ಉಜ್ಜೋಡಿ ಶ್ರೀ ಮಹಾಂಕಾಳಿ ದೇವಸ್ಥಾನದ ಸಮೀಪ ಬಹುಕಾಲದ ಅಂಡರ್ ಪಾಸ್ ನಿರ್ಮಾಣಕ್ಕೆ ಪೂರಕ ಕಾಮಗಾರಿ ಕಳೆದ ಫೆಬ್ರವರಿಯಲ್ಲಿ ಆರಂಭವಾಗಿದೆ. ಕಾಮಗಾರಿ ಸಮಯದಲ್ಲಿ ರಾ.ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗಬಾರದೆಂದು ಪಂಪ್ ವೆಲ್ ನಿಂದ ಉಜ್ಜೋಡಿಯವರೆಗೆ ಎರಡೂ ಬದಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅದೂ ಸಮರ್ಪಕವಾಗಿಲ್ಲ ಎಂಬುವುದು ಆರೋಪವಾಗಿದೆ.
ಮಂಗಳೂರು: ರಸ್ತೆಯಲ್ಲಿದ್ದ ಹೊಂಡಕ್ಕೆ ಬಲಿಯಾಯಿತು ಯುವಕನ ಜೀವ : ಪಂಪ್ ವೆಲ್ ಬಳಿ ಘಟನೆ