ಕಾಸರಗೋಡು, ಆ. 23 (DaijiworldNews/MB) : ಜಿಲ್ಲೆಯಲ್ಲಿ ಆದಿತ್ಯವಾರ 85 ಮಂದಿಗೆ ಸೋಂಕು ದೃಢಪಟ್ಟಿದೆ. 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಈ ಪೈಕಿ 83 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶದಿಂದ ಹಾಗೂ ಹೊರರಾಜ್ಯದಿಂದ ಬಂದ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಕಾಞಂಗಾಡ್ ನಗರಸಭಾ ವ್ಯಾಪ್ತಿಯಲ್ಲಿ 24, ಕಾಸರಗೋಡು 2, ವಳಿಯಪರಂಬ 10, ಅಜಾನೂರು 6, ಚೆಮ್ನಾಡ್ 17, ಚೆಂಗಳ, ನೀಲೇಶ್ವರ, ಬದಿಯಡ್ಕ, ಕೋಡೋ ಬೇಳೂರು, ಮಡಿಕೈ, ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 1, ಪಳ್ಳಿಕೆರೆ 5, ಮೀಂಜ, ಉದುಮ ತಲಾ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಇದುವರೆಗೆ 1976 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 3103 ಮಂದಿ ಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 510 ಮಂದಿ ವಿದೇಶದಿಂದ, 363 ಮಂದಿ ಹೊರರಾಜ್ಯದಿಂದ ಬಂದವರು ಒಳಗೊಂಡಿದ್ದಾರೆ. 2889 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 30 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. 5,336 ಮಂದಿ ನಿಗಾದಲ್ಲಿದ್ದು, 994 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.