ಉಡುಪಿ, ಆ. 23 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಮತ್ತೆ 117 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10126 ಕ್ಕೆ ಏರಿಕೆಯಾಗಿದೆ.

ಇಂದು ಸೋಂಕು ದೃಢಪಟ್ಟ 117 ಮಂದಿಯ ಪೈಕಿ 39 ಮಂದಿಗೆ ಸೋಂಕು ಲಕ್ಷಣಗಳಿದ್ದು 78 ಮಂದಿಯಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಇನ್ನು ಕೂಡಾ 1330 ಮಂದಿಯ ಕೊರೊನಾ ವರದಿ ಬರಬೇಕಾಗಿದೆ.
ಇನ್ನು ಇಂದು 309 ಮಂದಿ ಸೋಂಕಿತರು ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ 7401 ಸೋಂಕಿತರು ಗುಣಮುಖರಾಗಿದ್ದಾರೆ.
ಇಂದು ಉಡುಪಿ ತಾಲೂಕಿನಲ್ಲಿ 58, ಕುಂದಾಪುರದಲ್ಲಿ 35, ಕಾರ್ಕಳ ತಾಲ್ಲೂಕಿನಲ್ಲಿ 20 ಪ್ರಕರಣ ಪತ್ತೆಯಾಗಿದೆ. ಹಾಗೆಯೇ ನಾಲ್ವರು ಇತರೆ ಜಿಲ್ಲೆಯವರಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಭಾನುವಾರ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಒಬ್ಬರು ಉಡುಪಿ ತಾಲೂಕಿನ 42 ವರ್ಷದ ಗಂಡಸಾಗಿದ್ದು ಮತ್ತೋರ್ವರು ಕಾರ್ಕಳ ತಾಲೂಕಿನ 73 ವರ್ಷದ ಗಂಡಸಾಗಿದ್ದಾರೆ. ಈವರೆಗೂ 84 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು 372 ಕೊರೊನಾ ವರದಿ ನೆಗೆಟಿವ್ ಆಗಿದ್ದು ಪ್ರಸ್ತುತ 2,648 ಸೋಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.