ಬೆಳಗಾವಿ, ಏ 30: ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಬಿಜೆಪಿ ರೋಡ್ ಶೋನಲ್ಲಿ ಮಾತನಾಡಿದ ಸಚಿವ ಅನಂತ್ ಕುಮಾರ್, ವಿರೋಧಿಗಳ ಮೇಲೆ ವಾಗ್ದಾಳಿ ನಡೆಸಿದ್ದು, ಭಾಷಣದ ವಿಡಿಯೋ ಈಗ ವೈರಲ್ ಆಗಿದೆ. ಬುದ್ಧಿ ಜೀವಿಗಳು, ನಟ ಪ್ರಕಾಶ್ ರೈ ಅವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ. ಮೋದಿ ವಿರುದ್ದ ಪ್ರಚಾರ ನಡೆಸಲು ಗೌರಿ ಸಂತಾನವೇ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ' ಎಂದು ಕಿಡಿ ಕಾರಿದರು. ಇದೇ ವೇಳೆ ಪ್ರಕಾಶ್ ರೈ ವಿರುದ್ದವೂ ಕಿಡಿ ಕಾರಿ ಅವರ ನಾಲಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು , ತಾನು ಹಿಂದೂ ವಿರೋಧಿ ಅಲ್ಲ ಎನ್ನುತ್ತಾ, ನಿದ್ದೆ ಮಂಪರಿನಲ್ಲಿ ತಲೆ ಸರಿ ಇಲ್ಲದವರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅವರಿಗೆ ಕೇವಲ ಮಠ ಮಂದಿರಗಳ ಮೇಲೆ ಕಣ್ಣಿದ್ದು, ಮಸೀದಿ, ಚರ್ಚ್ಗಳಿಗೆ ಎಷ್ಟು ಹಣ ಬರುತ್ತದೆ ಎಂದು ಲೆಕ್ಕ ಇಟ್ಟಿದ್ದಾರಾ ಎಂದು ಪ್ರಶ್ನಿಸಿದರು.