ಮಂಗಳೂರು, ಆ. 24 (DaijiworldNews/MB) : ಕೊಂಕಣಿ ರಂಗಭೂಮಿ ಕಾರ್ಯಕರ್ತ, ನಾಟಕಕಾರ ಬೆನ್ನ ರುಜೈ 74 ನೇ ವಯಸ್ಸಿನಲ್ಲಿ ನಿಧನರಾದರು.





ಕೊಂಕಣಿ ರಂಗಭೂಮಿ ಪ್ರಿಯರಿಗೆ ಬೆನ್ನ ರುಜೈ ಎಂದೇ ಜನಪ್ರಿಯವಾಗಿರುವ ಕೊಂಕಣಿ ನಾಟಕ ಕಾರ್ಯಕರ್ತ ಮತ್ತು ನಾಟಕಕಾರ ಬೆನೆಡಿಕ್ಟ್ ಮಿರಾಂದ ಆಗಸ್ಟ್ 24 ಸೋಮವಾರ ನಿಧನರಾದರು.
ಮಾರ್ಚ್ 21, 1946 ರಂದು ಜನಿಸಿದ ಬೆನ್ನ ಪ್ರಸಿದ್ಧ ನಾಟಕಕಾರ ಹಾಗೂ ಪತ್ರಕರ್ತರು ಹೌದು. ಅವರು ಕಳೆದ 5 ದಶಕಗಳಿಂದ ಹಲವಾರು ಕೊಂಕಣಿ ಜನಪ್ರಿಯ ನಾಟಕಗಳಲ್ಲಿ ನಟಿಸಿದ್ದಾರೆ. ದಿವಂಗತ ಗಬ್ಬು ಉರ್ವ ಅವರು ಇವರ ಗುರು ಆಗಿದ್ದಾರೆ.
ನಾಟಕಕಾರನಾಗಿ ಅವರು ಅನೇಕ ಸಾಮಾಜಿಕ ಮತ್ತು ಧಾರ್ಮಿಕ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ. , ಅವರು ಒಟ್ಟು ಐದು ಸಾಮಾಜಿಕ ನಾಟಕಗಳು, ಎಂಟು ಧಾರ್ಮಿಕ ನಾಟಕಗಳು, ಎಂಟು ಹಾಸ್ಯ ಕಿರು ನಾಟಕಗಳು ಮತ್ತು ಆರು ಕವನಗಳ ಬರೆದಿದ್ದಾರೆ.
ಪತ್ರಕರ್ತರಾಗಿ, ಅವರು ಎರಡು ವರ್ಷಗಳ ಕಾಲ ಮಾಯ್-ಗವ್ನ್ (ಕೊಂಕಣಿ ಮಾಸಿಕ) ದ ಉಪ ಸಂಪಾದಕರಾಗಿದ್ದರು. ಹಾಗೆಯೇ ರೋಜಾರಿಯೋ ಪ್ರಾಂತ್ಯದ ಪ್ರಾಂತ್ಯ ಬುಲೆಟಿನ್ ರುಝೈಚಿನ್ ಲಾರನ್ನ ಸಂಪಾದಕರಾಗಿದ್ದರು.
ಅವರು ಆರು ವರ್ಷಗಳ ಕಾಲ ಕೊಂಕಣಿ ನಾಟಕ ಸಭೆಯ ಉಪಾಧ್ಯಕ್ಷರಾಗಿದ್ದರು ಮತ್ತು 'ಕಲಾ ಸಂಪತ್' ನ ಮೊದಲ ಅಧ್ಯಕ್ಷರಾಗಿದ್ದರು.
ಬೆನ್ನ ಅವರನ್ನು ಕೊಂಕಣಿ ಕ್ಯಾಥೊಲಿಕ್ ಸಂಘ ಬೆಂಗಳೂರು, ಬಹ್ರೇನ್ನ ಕೊಂಕಣಿ ಕುಟಾಮ್, ಕೊಂಕಣಿ ಪಾಕ್ಷಿಕ ಕಣ್ಣಿಕ್, ಕೊಂಕಣಿ ಬರಹಗಾರರ ವೇದಿಕೆ - ಕರ್ನಾಟಕ (ರಿ), ಕರ್ನಾಟಕ ಕೊಂಕಣಿ ಅಕಾಡೆಮಿ, ಕರಾವಳಿ ಕೊಂಕಣಿಗರು, ಕೊಂಕಣಿ ನಾಟಕ ಸಭಾ ಮಂಗಳೂರು ಮೊದಲಾದವರು ಗೌರವಿಸಿದ್ದಾರೆ.
ಇನ್ನು ಬೆನ್ನ ಅವರ ಪತ್ನಿ ಥೆರೆಸಾ ಮಿರಾಂದಾ ಅವರು ಕೂಡಾ ರಂಗಭೂಮಿ ಕಲಾವಿದರಾಗಿದ್ದರು.
ಬೆನ್ನ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಆಗಸ್ಟ್ 24 ರ ಸೋಮವಾರ ನಡೆಯಲಿದ್ದು, ಮಧ್ಯಾಹ್ನ 3 ರಿಂದ ಜೆಪ್ಪು ಚಾಪೆಲ್ನಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಜೆಪ್ಪುವಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.